Search This Blog

Friday, December 7, 2012

.

ನಿನ್ನಿಂದ ನಾ ಬದಲಾದೆ
ನಿನ್ನಿಂದ ನಾ ಸರಿಹೋದೆ
ನಿನ್ನಿಂದ ನಾ ಕವಿಯಾದೆ
ನನ್ನಿಂದ ನೀ ಯಾಕೆ ದೂರಾದೆ ???

Monday, November 5, 2012

.

ಜಿನುಗುತಿದೆ ಪ್ರೀತಿಯ ಸಿಂಚನ!
ಎದೆಯಾಳದಲ್ಲಿ ಒಲವಿನ ಕಂಪನ!!
ಈ ಮನಕೆ ಬೇಕಂತೆ ನಿನ್ನ ಆಲಿಂಗನ!!!
ಹಂಚಿಕೊಳ್ಳಲೇ ನಿನ್ನೊಡನೆ ನನ್ನುಳಿದ ಜೀವನ!!!!

Friday, July 6, 2012

ನಲ್ಲೆಯ ಬಿಸಿ ಅಪ್ಪುಗೆ

ನಲ್ಲೆಯ ಬಿಸಿ ಅಪ್ಪುಗೆ
ಬಯಸಿ ಬಂದಿತು ಸುಮ್ಮನೆ ಹಾಗೆ
ಮನದಲ್ಲಿ ಮೂಡಿದೆ ಕಾಮನ ಬಿಲ್ಲಿನ ಹೂ ನಗೆ
ಬೇರೂರುತ್ತಿದೆ ನವ ಜೀವನದ ಆಸೆ ಮೆಲ್ಲಗೆ.....
.

Wednesday, April 11, 2012

ಯುಗಾಂತ್ಯದ ದುಗುಢ!

ತಲ್ಲಣಿಸುತ ಕಾಯುತ್ತಿದೆ ಇಳೆ
ಚಿಮ್ಮುತ ಬಂದು ತಂಪೆರೆಯದೇಕೆ  ಮಳೆ

ಸೂರ್ಯನ ರುದ್ರ ನರ್ತನ

ಜೊತೆಗೊಂದಿಷ್ಟು ಭೂ ಕಂಪನ

ಎದುರಾಗಿದೆ  ಸುನಾಮಿಯ ಕಾರ್ಮೋಡ

ಎಲ್ಲೆಡೆ 2012 ರ ಯುಗಾಂತ್ಯದ ದುಗುಢ!!!!

Wednesday, March 28, 2012

Computer ಇಲ್ದೆ ಕೆಲ್ಸಾ ಇಲ್ಲಾ

Computer ಇಲ್ದೆ ಕೆಲ್ಸಾ ಇಲ್ಲಾ
Manager ಇಲ್ದೆ ಸಂಬಳ ಇಲ್ಲಾ
Appraisalಗೆ  ಯಾವ್ಡೆ ಅರ್ಥ ಇಲ್ಲಾ  ಲೈಫು ಇಷ್ಟೇನೆ..

Thursday, March 22, 2012

ಬೇವು ಬೆಲ್ಲದ ನಿರಂತರ ಸಂಯೋಗ

ನವ ಮನ್ವಂತರದ ಹೊಸ ರಾಗ
ಹಾಡ ಬೇಕನಿಸುತಿದೆ ಮನದಲ್ಲಿ ಈಗ
ಚೈತ್ರ ಮಾಸಕೆ ಹೊಸ ಚಿಗುರಿನ ಕಳೆ ತುಂಬಿತೀಗ
ಬಯಸೋಣ ಶುಭ ಸುದ್ದಿಯ ಪಂಚಾಗ.
ಅದುವೇ ಬೇವು ಬೆಲ್ಲದ ನಿರಂತರ ಸಂಯೋಗ....

Tuesday, March 20, 2012

ನೀ "ನಲ್ಲ" ನನ್ನ ಇನಿಯ.

ಕೊಲೆಯಾಗಿದೆ ಈ ಹೃದಯ......!!!!!
ಅವಳಿಗಿಲ್ವಂತೆ ಪ್ರೀತಿಸಲು ಸಮಯ....
ಸಿಕ್ಕಾಗಲೆಲ್ಲಾ ಹೇಳ್ತಾಳೆ, ನೀನಲ್ಲ ನನ್ನ ಇನಿಯ.......:(

ಅರಿಯಲಾರೆ ಗೆಳತಿ ಈ ನೋವಿಗೆ ಕಾರಣ ನೀನಾ?????

ಹೇಳಲಿಲ್ಲ ಯಾಕೆ ನೀ ಹೋಗುವ ಮುನ್ನಾ..
ದಿನಾ ಸಾಯುತ್ತಿದೆ ನಿನ್ನ ನೆನೆಸಿಕೊಂಡಾಗ ಈ ಮನ...
ನಿನ್ನ ಗುಂಗಲ್ಲೇ ಸದಾ ಬೇಯುತಿರುವೆನು ನಾ....
ಅರಿಯಲಾರೆ ಗೆಳತಿ ಈ ನೋವಿಗೆ ಕಾರಣ ನೀನಾ?????

ಅವಳಿಗಾಗಿಯೆ ಬರೆದಿದ್ದು ಈ ಕಾವ್ಯ...:)

ಅವಳ ಹೆಸರು ನವ್ಯ.
ಅವಳ ಸೊಬಗು ಭವ್ಯ
ಅವಳ ನಗು ಅದಮ್ಯ...
ಅವಳಿಗಾಗಿಯೆ ಬರೆದಿದ್ದು ಈ ಕಾವ್ಯ...:)

ಬ್ರಹ್ಮನ ಕುಂಚಕ್ಕೆ ಬೆಲೆ ತಂದವಳು ನೀನೆ



ಗೆಳತಿ ಒಮ್ಮೆ ಸವರಲೇ ನಿನ್ನ ಕೆನ್ನೆ
ಹೂವಿನ ಅಂದಕ್ಕೆ ಸಾಟಿ ನೀನೆ
ದುಂಬಿಯ ನರಳಾಟಕ್ಕೆ ಕಾರಣ ನೀನೆ
ಬ್ರಹ್ಮನ ಕುಂಚಕ್ಕೆ ಬೆಲೆ ತಂದವಳು ನೀನೆ....
ಬಳುಕುತ ಬರುವಾಗ ಕಣ್ಣಗಲಿಸಿ ನೋಡುತ್ತಿದ್ದವನು ನಾನೇ...:)

Monday, March 19, 2012

ಈ ಕವನವೇ ಕಾಣಿಕೆ

ಹೆಣ್ಣೇ ನಿನ್ನ ಅಂದ..
ಇಮ್ಮಡಿಸಿತು  ನೀನುಟ್ಟ ಸೀರೆಯಿಂದ.!!!!
ಬೆಳದಿಂಗಳೂ ಮರೆಯಾಗಿದೆ ನಿನ್ನ ಕಂಡಾಗಿನಿಂದ
ನಿನ್ನ ಸೌಂದರ್ಯಕೆ ಈ ಕವನವೇ ಕಾಣಿಕೆ ನನ್ನ ಕಡೆಯಿಂದ...

ಸ್ನೇಹ



ಇದು ಸ್ನೇಹಕ್ಕಾಗಿ ತುಡಿಯುವ ಮನಸು
ಬೇಡ ನಮ್ಮಲಿ ಎಂದಿಗೂ ಮುನಿಸು
ಕಾಣೋಣ ಸುಂದರ ಸ್ನೇಹದ ಕನಸು
ಗೆಳೆಯರೇ ನೀವು ನನ್ನೊಂದಿಗಿರಲು ಎಂಥಾ ಸೊಗಸು..:)

ವಿರಹ ಗೀತೆ

ಅವಳ ಅಂದಕೆ ನಾ ಹಿಡಿಯಾಗಿ ಸೋತೆ
ಅದಕ್ಕಾಗಿಯೇ ಹಾಡಿದ್ದು ಪ್ರೇಮ ಗೀತೆ
ನಗು ನಗುತಲೆ ಆರಿಸಿ ಹೋದಳು ಪ್ರೀತಿಯ ಹಣತೆ
ಅವಳಿಲ್ಲದ ಈ ಬಾಳು ಹೊಸತೊಂದು ವಿರಹ ಗೀತೆ....

ಯಾವುದೋ ಒಂದು ಕೊರತೆ

ನಿನ್ನ ನೋಡುತ ನಿಂತೆ
ಮಾಡೊ ಕೆಲಸ ಮರೆತೆ
ಇರುಳೆಲ್ಲ ನಿನ್ನದೆ ಚಿಂತೆ
ಹಗಲಲ್ಲಿ ಯಾವುದೋ ಒಂದು ಕೊರತೆ
ಅದು ಈ  ಹೃದಯಕೆ ಪ್ರೀತಿಯ ಅಪ್ಪುಗೆ ಬೇಕಂತೆ.....

ದಾಹ ಇಂಗಿಸಿದವಳು



ಸಕ್ಕರೆಯ ಗೊಂಬೆಯಂತವಳು
ಚಂದಿರನ ಮೊದಲ ಮಗಳಿವಳು
ಹೋಲಿಕೆಗೆ ಕಿಂಚಿತ್ತು ಸಿಗದವಳು
ಸೌಂದರ್ಯದ ಖನಿ ಇವಳು....

ಅವಳೇ ಅವಳೇ ...

ನಿದ್ದೆಯಲಿ ಕನಸಾಗಿ ಕಾಡಿದವಳು
ಬಿರುಗಾಳಿಯಲ್ಲೂ ತಂಗಾಳಿ ಬೀಸಿ ಹೋದವಳು
ಮನಸ್ಸಿನಲ್ಲಿ ಬಾವಿ ತೋಡಿ ದಾಹ ಇಂಗಿಸಿದವಳು....:)

ಮೂರ್ಛೆ ಹೋದೆ

ಹೌದು, ಅವಳು ಚಂಚಲೆ
ಕಾಡುತ್ತಾಳೆ ಹಗಲಿನಲ್ಲೆ
ಚಂದ್ರ ನಾಚಿದನು ಬಾನಿನಲ್ಲೆ
ನಾ  ನೋಡಿ ಮೂರ್ಛೆ ಹೋದೆ ದಾರಿಯಲ್ಲೇ...:)

ಬರುಡಾದ ಸಾಗರ

ಚಿಗುರುವ ಮುನ್ನವೇ ಚಿವುಟಿದೆ ನೀನು
ಇನ್ನೂ ಕಾರಣಗಳ ಹುಡುಕುತಿರುವೆಯೇನು
ಘೋರಿಯ ಮುಂದೆ ಅತ್ತರೆ ಸಿಗಲಾರೆ ಇನ್ನೂ ನಾನು ..

ಕರಿ ಮೋಡದ ಅಂಚಲ್ಲಿ
ಕಣ್ಣೀರ ಮಳೆಯಲ್ಲಿ
ನಾ ಬಿಟ್ಟು ಹೋದ ನೆನಪಲ್ಲಿ
ಮುಖ ಮುಚ್ಚಿ ಅತ್ತರೇನು ಸಖಿ......
ಬರುಡಾದ ಸಾಗರಕೆ ಈ ನಿನ್ನ ಕಣ್ಣೀರು ಸಾಲದು ಗೆಳತಿ....

ಹೊಸ ವರ್ಷ


ಹೊಸ ವರ್ಷ ಬರುತಿಹುದು
ಹಳೆ ನೆನಪು ಹಾಗೆ ಇಹುದು

ಮಳೆ ಎಲ್ಲೋ ಬಿಳುತಿಹುದು
ಕನಸೊಂದು ಮೊಳೆತಿಹುದು..

ಈ ಮನವೇಕೋ ನಗುತಿಹುದು
ಹೊಸ ಹರುಷದಿ ಕುಣಿದಿಹುದು....

ಕಲಿತು ಕಲಿಸೋಣ ಕನ್ನಡವನ್ನ

ಕನ್ನಡ ನನ್ನ ತನ..
ಅದಕ್ಕಾಗಿಯೇ ಮೀಸಲು ಈ ನನ್ನ ಮನ..
ಬಾರೋ ಅಣ್ಣಾ ಜೊತೆಯಾಗಿ ಕಲಿತು ಕಲಿಸೋಣ ಕನ್ನಡವನ್ನ...

ಎಂದೂ ಬತ್ತದ ಕೊಳ

ಮನದಿ ಮೂಡಿದ ಹಸಿ ರಾಗ...
ಯಾಕೋ ನೆನಪಾಯಿತೀಗ...
ನಿನ್ನ ನೆನಪು ಎಂದೂ  ಬತ್ತದ ಕೊಳವೀಗ..

ಹೃದಯ ಕೊಂದವಳು

ಇರುಳಲ್ಲಿ ಕಾಡಿದವಳು.
ಕನಸಲ್ಲಿ ಬಂದು ಕೊಂದವಳು...
ತಿರುಗಿಯೂ ನೊಡದೆ ಪ್ರೀತಿ ಒದ್ದು ಹೋದವಳು..
ಅವಳೆ.. ಅವಳೆ... ಈ ಹೃದಯ ಕೊಂದು, ಕಂಡರು ಕಾಣದಂತೆ ತಿರುಗಾಡುವವಳು

ಹುಚ್ಚನಂತೆ ಅರಾದಿಸುವೆ....

ಹಗಲಿರುಳೆನ್ನದೆ ಕಾಡುತಿದ್ದ ನುಣುಪಾದ ಅವಳ ಕೆನ್ನೆ...
ಹೊದ್ದು ಹೋದಳು ನನ್ನ ಮನಸನ್ನೆ....
ಆದರೂ ಹುಚ್ಚನಂತೆ ಅರಾದಿಸುವೆ, ಆ ನನ್ನ ಕನ್ಯೆಯನ್ನೇ...

ಚಿರವಿರಹಿ.....

ಸವಿಯಲು ಹೋದೆ ಪ್ರೀತಿಯ ಸಿಹಿ....
ಹೃದಯಕ್ಕೆ ಉಣಿಸಿದಳು ಅಗಲಿಕೆಯ ಕಹಿ.....
ಇಂದಿಗೂ ಅವಳ ನೆನಪಲ್ಲಿ ನಾ ಚಿರವಿರಹಿ......

ಒಣಗಲಿ ಆ ನಿನ್ನ ಗಾಯ

ಇರಲಿ ಬಿಡೊ ಗೆಳೆಯ...
ತುಸು ಬೇಗ ಒಣಗಲಿ ಆ ನಿನ್ನ ಗಾಯ....
ಚಿಂತೆ ಬಿಟ್ಟು ಹುಡುಕಿಕೊ ಮತ್ತೊಂದು ಹೃದಯ.....:)

ಒಮ್ಮೆ ಬಾರಿನಲ್ಲಿ ಕೂತು ಮಾತಾಡೋಣ

ಹೂ ಬಾಡಲು ಬೇಕೇ ಕಾರಣ....
ಮನದ ಬಾಗಿಲಿಂದ ತೆಗೆದಾಯ್ತು ಪ್ರೀತಿಯ ತೋರಣ...
ಈ ನೋವನ್ನು ಯಾರಿಗೆಳೋಣ...
ಬಾ ಒಮ್ಮೆ ಬಾರಿನಲ್ಲಿ ಕೂತು ಮಾತಾಡೋಣ..

ಮನದ ಗೋಡೆ

ಮನದ ಗೋಡೆಗೆ ಮಸಿ ಬಳಿದಿಹಳು....
ಮುದುಡಿ ಹೋದ ಮನಕೆ ಕಾರಣ ಅವಳು....

ಇನ್ನೂ ಕಾರಣಗಳ ಹುಡುಕುತಿರುವೆಯೇನು

ಹಲ್ಲು ಬಾರದ ಕಂದನಂತಿದ್ದೆ ನಾನು
ಕಂಡರು ಕಾಣದಂತೆ ತಿರುಗಾಡುವೆಯೇನು...
ನಗುವೆ ಬಾರದಂತೆ ಮಾಡಿ ಹೋದೆ ನೀನು
ಇನ್ನೂ ಕಾರಣಗಳ ಹುಡುಕುತಿರುವೆಯೇನು
ಸಾವಿರ ಜನ್ಮ ಬಂದರು ನಗಲಾರೆ ನಾನು....

ಜನ್ಮ ದಿನದ ಶುಭಾಶಯ.....

ಜನ್ಮ ದಿನದ ಶುಭಾಶಯ.....
ಆಗಲಿ ಹೊಸ ಜೀವನದ ಉದಯ....
ಸೂರ್ಯನ ಕಿರಣದಂತೆ ಪ್ರಜ್ವಲಿಸು ಎಂಬ ಆಶಯ...
ನಿನ್ನ ಏಳ್ಗೆ ಎಂದಿಗೂ ಉಂಟುಮಾದದಿರಲಿ ಯಾರಲ್ಲೂ ಪ್ರಳಯ

ಒಲ್ಲೆ, ನಾ ಒಲ್ಲೆ.

ಅವಳು ನನ್ನ ನಲ್ಲೇ...
ಸೌಂದರ್ಯಕಿಲ್ಲ ಯಾವುದೆ ಏಲ್ಲೆ..
ಚಂದಿರನು ನೋಡಿ ನಾಚುವನು ಬಾನಿನಲ್ಲೆ.
ಪ್ರೀತಿಸು ಅಂದರೆ ಹೇಳುವಳು, ಒಲ್ಲೆ, ನಾ ಒಲ್ಲೆ.....

ಒಂಟಿ ತನ

ಕಾಡುವ ಹೃದಯಕೆ ಬರಲಿಲ್ಲ ಏಕೆ ಪ್ರೀತಿ...
ದಟ್ಟಡವಿಯಲಿ ಒಂಟಿ ತನ ಕಾಡುವ ರೀತಿ....

ಕಾರಂಜಿಯಂತ ನಿನ್ನ ನಗೆ, ಕೊ೦ದಿತು ನನ್ನ ಬಗೆ ಬಗೆ...
ತಿರುಗಿ ನೋಡ ಬಾರದೇ ಒಮ್ಮೆ ನನ್ನ ಹಾಗೆ...

ಪ್ರೀತಿಯ ಸಿಂಚನ.

ಕಾದಿರುವುದು ನನ್ನ ಮನ.
ಬೇಕದಕೆ ಸಣ್ಣ ಸಾಂತ್ವಾನ...
ಹೇಳೆ ಗೆಳತಿ ಕೊಡುವೆಯ ಪ್ರೀತಿಯ ಸಿಂಚನ..

ಆ ನನ್ನ ಹೃದಯಕೆ ಕರುಣೆ ಎಂದು ಬರುವುದು???...



ಮನವೇಕೋ ಮುದುಡಿಹುದು....
ಅಪ್ಪುಗೆಯನ್ನು ಬಯಸಿಹುದು..
ಆ ನನ್ನ ಹೃದಯಕೆ ಕರುಣೆ ಎಂದು ಬರುವುದು???..

ಆಷಾಡದ ಗಾಳಿಯಂತೆ ಬಾ, ನಸುಕಿನ ಮಂಜಿನತೆ ಬಾ.


ಕಾದಿರುವೆ ಸಖಿ ನಿನ್ನ ಆಗಮನಕ್ಕಾಗಿ....

ಕಳೆದು ಹೋಯಿತು ವರುಷ ನೀ ನನ್ನ ಬಿಟ್ಟು ಹೋಗಿ...


ಕನವರಿಸುತ ನಿನ್ನ ಮರೆಯಲಿ ಹೇಗೆ..

ಮುದ್ದಾಡುವ ಬಯಕೆ ಇನ್ನೂ ಇದೆ ಹಾಗೆ


ಈ ಗೋಳನ್ನು ಕೇಳೋರು ಯಾರು

ಸಿಗುವುದೇ ಎಳೆಯೋದಿಕ್ಕೆ ನಿನ್ನ ಪ್ರೀತಿಯ ತೇರು....???


ಆಷಾಡದ ಗಾಳಿಯಂತೆ ಬಾ, ನಸುಕಿನ ಮಂಜಿನತೆ ಬಾ..
ಕಳೆದು ಹೋದ ದಿನವನ್ನು ಬಾಚಿ ತಬ್ಬೋಣ. ಒಮ್ಮೆ ಬಾರೆ ಗೆಳತಿ.

ಲೈಫು ಇಷ್ಟೇನೆ....


ಲೆಟಾಗೆದ್ದು ಸ್ನಾನ ಮಾಡ್ಕೊಂಡ್
ಅರ್ಧಂಬರ್ಧ ಹಲ್ಲುಜ್ಕೋಂಡ್
ಆಫೀಸ್ ಗೆ ಬಂದು ಕೆಲ್ಸಾ ಮಾಡು, ಲೈಫು ಇಷ್ಟೇನೆ...

Facebook ಮಾತ್ರ ಬಿಡ್ಲೆ ಬೇಡ
Orkut ಮಾತ್ರ ಮರಿೇಲೆ ಬೇಡ
ಬೇಜಾರು ಆದ್ರೆ Chat ಮಾಡ್ಕೋ, ಲೈಫು ಇಷ್ಟೇನೆ..

Smartwork ಮಾತ್ರ ಮಾಡ್ಲೆ ಬೇಕು
Hardwork ಮಾತ್ರ ಮಾಡ್ಲೆ ಬೇಡ
hardwork ಗೆ ಎಲ್ಲೂ ಬೆಲೆನೇ  ಇಲ್ಲಾ.. ಲೈಫು ಇಷ್ಟೇನೆ..

ದೇವ್ರುನ್ನ ನಬ್ಕೊಂಡು ಕಾಯಿ ಹೋಡ್ಕೋ
ಮನುಷ್ಯರನ್ನ ನಂಬ್ಕೊಂಡು ತಲೆ ಚಚ್ಕೋ
ನಿನ್ನನ್ನ ನೀನು ನಂಬಲೇ ಬೇಡ ಲೈಫು ಇಷ್ಟೇನೆ..

Computer ಇಲ್ದೆ ಕೆಲ್ಸಾ ಇಲ್ಲಾ
Manager ಇಲ್ದೆ ಸಂಬಳ ಇಲ್ಲಾ
Appraisalಗೆ  ಯಾವ್ಡೆ ಅರ್ಥ ಇಲ್ಲಾ  ಲೈಫು ಇಷ್ಟೇನೆ..

About Me

My photo
ಪ್ರತಿದಿನ ಗೆಳಯರ ಜೊತೆ ಬೆರೆಯುತ್ತ ಕೆಲಸಕ್ಕೆ ಬಾರದ ವಿಷಯಗಳನ್ನು ಅನಾವಶ್ಯಕವಾಗಿ ಚರ್ಚಿಸುತ್ತ, ಕೆಲವೊಮ್ಮೆ ಇಂತಹ ಚರ್ಚೆಗಳಲ್ಲಿ ಗೆಲ್ಲುತ್ತ ಮತ್ತೊಮ್ಮೆ ಸೋಲುತ್ತ.. ನಿರಾಯಾಸವಾಗಿ ಕಛೇರಿಯ ಕೆಲಸವನ್ನು ನಿಷ್ಟೇಯಿಂದ ನಿಭಾಯಿಸುತ್ತಾ, ಪ್ರತಿದಿನದ ಸವಾಲುಗಳನ್ನು ಧೈಯವಾಗಿ ಕೆಲವೊಮ್ಮೆ ಹೇಡಿಯಂತೆ ಎದಿರುಸುತ್ತ, ಕೆಲವೊಮ್ಮೆ ಅತಿಯಾದ ಜವಾಬ್ದಾರಿಯಿಂದ ಮತ್ತೊಮ್ಮೆ ಬೇಜವಾಬ್ದಾರಿಯಿಂದ ಅಂತೂ.. ಇಂತೂ.. ಕಳೆದ 29 ವರ್ಷಗಳಿಂದ ಈ ಸುಂದರ ಪೃಥ್ವಿಯ ದಕ್ಷಿಣ ಭಾಗದಲ್ಲಿರುವ ಏಷಿಯಾ ಖಂಡದ ಭಾರತ ದೇಶದ ಕರ್ನಾಟಕ ರಾಜ್ಯದ ಮಹಾನಗರಿ ನಮ್ಮ ಬೃಹತ್ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಾ ಇದ್ದೇನೆ. ಜೀವನದಲ್ಲಿ ಸಂತೋಷ ಮತ್ತು ದುಃಖ ಸಮನಾಗಿ ಅನುಭವಿಸುತ್ತಾ.... ನಿಮ್ಮ ಗೆಳೆಯ ಹೇಮಂತ್ ಕುಮಾರ್