Search This Blog

Friday, September 12, 2025

ನೀನೆ ನನ್ನ ಕೋಮಲೆ

ಮಲ್ಲೆ, ಒಹ್ ಮಲ್ಲೆ, ನೀನೆ ನನ್ನ ಕೋಮಲೆ !

ನಿನ್ನೊಂದಿಗೆ ಒಡಿಯಲೇ ಸದಾ ಲಲ್ಲೆ?

ಬೇಕಿಲ್ಲ ನಮ್ಮಿಬ್ಬರ ನಡುವೆ ಯಾವುದೇ ಎಲ್ಲೇ.

ಕಾರಣ ನೀನು ನನಗಾಗಿಯೇ ಹುಟ್ಟಿರುವೆಯಲ್ಲೆ!!

ಕೊಂಚ ಹೊತ್ತು ಮಲಗೇಳಲೇ ನಿನ್ನ ಮಡಿಲಿನಲ್ಲೇ ?

ನಿನ್ನ ನೆನೆಸಿಕೊಂಡಾಗಲೆಲ್ಲ ಮನಸ್ಸು ಹೇಳುತ್ತೆ ಒಹ್ ಭಲ್ಲೆ ಭಲ್ಲೆ!!


-----------------ನನ್ನ ದೇವತೆಗಾಗಿ ------------------- 

Wednesday, February 18, 2015

ನನ್ನ ದೇವತೆ

ಬರೆದಾಯಿತು  ನಿನ್ನಯ  ಮೇಲೊಂದು ಕವಿತೆ
ಹೇಳುವ ಆಸೆ ನೀನೆ ನನ್ನ ದೇವತೆ

ಸುಖಕರವಾಗಿರಲಿ ನಿನ್ನಯ  ಪಯಣ
ನೀ ಬಿಟ್ಟು ಹೋದ ನೆನಪುಗಳಲ್ಲೆ ನನ್ನುಳಿದ ಜೀವನ.

#Goddess

Wednesday, November 27, 2013

ನಿನ್ನ ನಗುವೇ ನನಗೆ ಅಮೃತ

ಕಣ್ಣೆರಡು ಸಾಲದಾಗಿದೆ ಸವಿಯಲು ನಿನ್ನ ಅಂದವ..! 
ಮನವೇಕೊ ಬಯಸಿದೆ ವರ್ಣಿಸಲು ನಿನ್ನ ಚಂದವ..!!
ನಿನ್ನ ನಗುವೇ ನನಗೆ ಅಮೃತ, ಓ ಕೋಮಲೆ ..! 
ನಿನ್ನಂದ ಹೊಗಳುತ್ತಿರುವುದೇ ನನಗಿರುವ ಕಾಯಿಲೆ..!!

Thursday, October 24, 2013

ಕಲಾ ರಸಿಕ

ಈ ಕಾವ್ಯ ಕೃಷಿಗೆ ಪ್ರೇರಣೆ ನೀನು..!
ದೇವಲೋಕದ ಹನಿ ಮುತ್ತು ನೀನು..!! 
ಸೌಂದರ್ಯ ಸೊಬಗಿನ ಖನಿ ನೀನು...!
ನಿನ್ನಂದ ಹೊಗಳುವ ಕಲಾ ರಸಿಕ ನಾನು.... !!

Monday, July 22, 2013

ನಿನ್ನ ನೋಡುತ ನಿಂತೆ
ಮಾಡೊ ಕೆಲಸ ಮರೆತೆ
ಇರುಳೆಲ್ಲ ನಿನ್ನದೆ ಚಿಂತೆ
ಹಗಲಲ್ಲಿ ಯಾವುದೋ ಒಂದು ಕೊರತೆ
ಅದು ಈ  ಹೃದಯಕೆ ಪ್ರೀತಿಯ ಅಪ್ಪುಗೆ ಬೇಕಂತೆ.....
ಅವಳ ಹೆಸರು ನವ್ಯ.
ಅವಳ ಸೊಬಗು ಭವ್ಯ
ಅವಳ ನಗು ಅದಮ್ಯ...
ಅವಳಿಗಾಗಿಯೆ ಬರೆದಿದ್ದು ಈ ಕಾವ್ಯ...:)
ಹೆಣ್ಣೇ ನಿನ್ನ ಅಂದ..
ಇಮ್ಮಡಿಸಿತು  ನೀನುಟ್ಟ ಸೀರೆಯಿಂದ.!!!!
ಬೆಳದಿಂಗಳೂ ಮರೆಯಾಗಿದೆ ನಿನ್ನ ಕಂಡಾಗಿನಿಂದ
ನಿನ್ನ ಸೌಂದರ್ಯಕೆ ಈ ಕವನವೇ ಕಾಣಿಕೆ ನನ್ನ ಕಡೆಯಿಂದ...

About Me

My photo
ಪ್ರತಿದಿನ ಗೆಳಯರ ಜೊತೆ ಬೆರೆಯುತ್ತ ಕೆಲಸಕ್ಕೆ ಬಾರದ ವಿಷಯಗಳನ್ನು ಅನಾವಶ್ಯಕವಾಗಿ ಚರ್ಚಿಸುತ್ತ, ಕೆಲವೊಮ್ಮೆ ಇಂತಹ ಚರ್ಚೆಗಳಲ್ಲಿ ಗೆಲ್ಲುತ್ತ ಮತ್ತೊಮ್ಮೆ ಸೋಲುತ್ತ.. ನಿರಾಯಾಸವಾಗಿ ಕಛೇರಿಯ ಕೆಲಸವನ್ನು ನಿಷ್ಟೇಯಿಂದ ನಿಭಾಯಿಸುತ್ತಾ, ಪ್ರತಿದಿನದ ಸವಾಲುಗಳನ್ನು ಧೈಯವಾಗಿ ಕೆಲವೊಮ್ಮೆ ಹೇಡಿಯಂತೆ ಎದಿರುಸುತ್ತ, ಕೆಲವೊಮ್ಮೆ ಅತಿಯಾದ ಜವಾಬ್ದಾರಿಯಿಂದ ಮತ್ತೊಮ್ಮೆ ಬೇಜವಾಬ್ದಾರಿಯಿಂದ ಅಂತೂ.. ಇಂತೂ.. ಕಳೆದ 29 ವರ್ಷಗಳಿಂದ ಈ ಸುಂದರ ಪೃಥ್ವಿಯ ದಕ್ಷಿಣ ಭಾಗದಲ್ಲಿರುವ ಏಷಿಯಾ ಖಂಡದ ಭಾರತ ದೇಶದ ಕರ್ನಾಟಕ ರಾಜ್ಯದ ಮಹಾನಗರಿ ನಮ್ಮ ಬೃಹತ್ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಾ ಇದ್ದೇನೆ. ಜೀವನದಲ್ಲಿ ಸಂತೋಷ ಮತ್ತು ದುಃಖ ಸಮನಾಗಿ ಅನುಭವಿಸುತ್ತಾ.... ನಿಮ್ಮ ಗೆಳೆಯ ಹೇಮಂತ್ ಕುಮಾರ್